ಅವಳು ನನ್ನನು ಎಲ್ಲಾ ಕೇಳಿದಳು, ಪ್ರೀತಿಯೊಂದನು ಬಿಟ್ಟು !!
ನಮ್ಮ ಬಿಗಿದಪ್ಪುಗೆಯಲಿ ಉಸಿರು ಗಟ್ಟಿ ನಿಂತಿದೆ ಗಾಳಿ !
ಮಧು ಹೀರಿ ಹಾರಿದ ಜೇನು, ವರ್ಷಾಚರಣೆಯ ಸಂಬ್ರಮದಲ್ಲಿದೆ!!
ಕಗ್ಗತ್ತಲ ಕಾರ್ಮೋಡ ಕರಗಿ, ಸೋನೆ ಮಳೆ ಹುಯ್ಯುತಿದೆ :)
ಪ್ರೀತಿಯ ನೌಕೆ ಯಾನ ನಡೆಸುತಿದೆ, ಮೌನ ತೀರವ ದಾಟಿ ಹೊರಟಿದೆ, ಮಾತಿನ ಬಂದರಿಗೆ ಲಗ್ಗೆ ಹಾಕಲು!!
ನೀ ಹಾಡಿದ ಅದೇ ಹಾಡು ಮೌನ ರಾಗವಾಗಿ ಕಾಡುತಿದೆ, ಮನದಾಳದಿ ಭಾವನೆಗಳ ಬಿತ್ತಿ ರುದ್ರ ನರ್ತನ ಮಾಡಿ ನಲಿದಿದೆ
ಹೆಪ್ಪುಗಟ್ಟಿದ ಹೃದಯದ ಮೇಲೆ ಮಧುರ ಹನಿಗಳ ಸಿಂಚನ, ಅರಳಬಹುದೇ ಮರಳಿ ಮನದಲಿ ಪ್ರೀತಿ ಅಲೆಗಳ ಹೂಬನ !!
ಮಿಂಚುಳ್ಳಿ ಮಿನುಗುತಿಹಳು, ಮನವನು ಕದಡುತಿಹಳು ! ಎದೆಯಲಿ ಗುರುತು ಬಿದ್ದರೆ, ಮಡದಿ ಚಳಿ ಬಿಡಿಸ್ಯಾಳು :)
ಸ್ವಲ್ಪವೇ ಸರಿದ ರವಿಕೆ, ಮೆಲ್ಲನೆ ಏನೋ ಗುನುಗುತಿದೆ ! ಛಾತಿಯ ಮೇಲಿನ ಮಸುಕಾದ ಮಚ್ಚೆ, ನಾಟಿದೆ ಕಣ್ಣಿಗೆ ನಯವಾಗಿ !!
No comments:
Post a Comment