Tuesday 24 December, 2019

ದ್ವಂದ್ವ

ಮನದ ಹೆದ್ದಾರಿಗೆ ಕವಲುದಾರಿಯ ದ್ವಂದ್ವ
ಬರದಿ ಸಾಗುವ ಹೆಜ್ಜೆಗಳಿಗಿಂದು ತಡೆಗೋಡೆ ಕಂಡ್ವ
ಮಸ್ತಕದ ಪುಸ್ತಕಕೆ ಗೆದ್ದಲಿಡಿಯೋ ಮುನ್ಸೂಚನೆ ಅನಿಸೋಲ್ವ
ತಿಳಿಯಾಗುವುದೆ ತೇಲಿ ಬೇಗ ಈ ದ್ವಂದ್ವ....  |ಪ|

ನೀಲಿ ಬಾನ ಮೇಲೆ ತೇಲುತಿಹ ಕನಸುಗಳೇ
ಭುವಿಯ ಮೇಲಣ ಚಿತ್ರಣದ ಮನವರಿಕೆಯಿರಲಿ ನಿಮಗೆ
ಇರದಿರೇ, ಮಸಣದ ಮಣ್ಣಿನೊಳಗೆ ಲೀನವಾದೀರಿ ಜೋಕೆ
ತಿಳಿಹೇಳುತಿರುವೇ ಕೇಳಿ ತೊರೆದು ಎಲ್ಲಾ ಅಂಕೆ..ಶಂಕೆ...|೧|

ದಾರಿ ಎನಿತಿರಲಿ ಸಾಗು ನೀ ನಿಜ ಸ್ಥೈರ್ಯದಿ ಮನುಜ..
ಹಾರಿ ಬಿಡು ಮನದಕ್ಕಿಯನು ನಾಭಿರಜ್ಜಿನ ಟೊಂಕ ಕಡಿದು
ಕಾಯಕವು ಸರಿಯಿರೇ, ಅರಳೀತೂ ಮಸಣದೊಳ್ ಘಮ ಘಮಿಸೊ ಹೂ
ನೀನೇ ಶಕ್ತಿ, ನೀನೆ ಯುಕ್ತಿ, ನಿನ್ನೊಳಗೆ ಅವಿತಿಹುದು ದಾರಿ ನಿನ ದ್ವಂದ್ವಕೆ....|೨|


Sunday 11 December, 2011

 ರಮಣೀಕಾಂತ

ಮರಳಿ ಬಾ ರಮಣೀ
ಭಗೆದಿಡಬೇಕು ಮನದಾಳದ ಇಂಗಿತವನ್ನು
ಇದಿರು ನೋಡಿ ಮಸುಕಾಗಿದೆ ದಾರಿ
ಏರುಪೇರಾಗಿದೆ ಮಿಡಿತ, ಮರಗಟ್ಟಿದೆ ಬದುಕು ..ಮ..

ಸವಿಸುಂದರ ಬಾಳದಾರಿಯಿಂದ ಅಚಾನಕ್ಕಾಗಿ ಹೊರನಡೆದೆ
ಸಕಲವ ತಿಳಿದು ಮರಳುಗಾಡ ಚೆಲುವಿಗೆ ಮರುಳಾದೆ
ಅಮೃತವ ಹಂಚಲು ಹೋಗಿ, ಹಾಲಹಲದ ಪಾಲದೆ ..ಮ..
             
ಮರಳಿ ಬಾ ರಮಣೀ
ಕಾಳಸಂತೆಯಲಿ ಬಿಕರಿಯಾಗುವ ಮುನ್ನ
ಸಿರಿದೇವಿ ನಿನ್ನ ಕಾಂತಿ ಕಮರುವ ಮುನ್ನ
ಕಣ್ತೆರೆದು ನೋಡು ತೀರ ಕರಗುವ ಮುನ್ನ

ಕಾಂತನಿಲ್ಲಿ ಕಾದಿಹನು ರಮಣೀ





Thursday 24 February, 2011

ಕರಿನೆರಳು

ಮನದಲ್ಲಿ ಕರಿನೆರಳು ತುಂಬಿದೆ
ಎಲ್ಲೆಲ್ಲೂ ಮೌನವೇ ಮನೆ ಮಾಡಿದೆ
ಭಾವನೆಗಳು ಬರಿದಾಗಿವೆ
ನೆನಪುಗಳು ಎಡೆಬಿಡದೆ ಸುಳಿದಾಡಿದೆ .. !
ಕನಸಿನಲು ಒಂದೇ ಪ್ರಶ್ನೆ ಕಾಡಿದೆ
ನೀನೇಕೆ ಬದಲಾದೆ
ನೀನೇಕೆ .... ಬರಿದಾದೆ ..!
ಹೇಳು, ನನ್ನದೇನು ತಪ್ಪಿದೆ .. !!

Tuesday 2 February, 2010

ಜೇನು ಗೂಡು

  • ಅವಳು ನನ್ನನು ಎಲ್ಲಾ ಕೇಳಿದಳು, ಪ್ರೀತಿಯೊಂದನು ಬಿಟ್ಟು !!
  • ನಮ್ಮ ಬಿಗಿದಪ್ಪುಗೆಯಲಿ ಉಸಿರು ಗಟ್ಟಿ ನಿಂತಿದೆ ಗಾಳಿ !
  • ಮಧು ಹೀರಿ ಹಾರಿದ ಜೇನು, ವರ್ಷಾಚರಣೆಯ ಸಂಬ್ರಮದಲ್ಲಿದೆ!!
  • ಕಗ್ಗತ್ತಲ ಕಾರ್ಮೋಡ ಕರಗಿ, ಸೋನೆ ಮಳೆ ಹುಯ್ಯುತಿದೆ :)
  • ಪ್ರೀತಿಯ ನೌಕೆ ಯಾನ ನಡೆಸುತಿದೆ, ಮೌನ ತೀರವ ದಾಟಿ ಹೊರಟಿದೆ, ಮಾತಿನ ಬಂದರಿಗೆ ಲಗ್ಗೆ ಹಾಕಲು!!
  • ನೀ ಹಾಡಿದ ಅದೇ ಹಾಡು ಮೌನ ರಾಗವಾಗಿ ಕಾಡುತಿದೆ, ಮನದಾಳದಿ ಭಾವನೆಗಳ ಬಿತ್ತಿ ರುದ್ರ ನರ್ತನ ಮಾಡಿ ನಲಿದಿದೆ
  • ಹೆಪ್ಪುಗಟ್ಟಿದ ಹೃದಯದ ಮೇಲೆ ಮಧುರ ಹನಿಗಳ ಸಿಂಚನ, ಅರಳಬಹುದೇ ಮರಳಿ ಮನದಲಿ ಪ್ರೀತಿ ಅಲೆಗಳ ಹೂಬನ !!
  • ಮಿಂಚುಳ್ಳಿ ಮಿನುಗುತಿಹಳು, ಮನವನು ಕದಡುತಿಹಳು ! ಎದೆಯಲಿ ಗುರುತು ಬಿದ್ದರೆ, ಮಡದಿ ಚಳಿ ಬಿಡಿಸ್ಯಾಳು :)
  • ಸ್ವಲ್ಪವೇ ಸರಿದ ರವಿಕೆ, ಮೆಲ್ಲನೆ ಏನೋ ಗುನುಗುತಿದೆ ! ಛಾತಿಯ ಮೇಲಿನ ಮಸುಕಾದ ಮಚ್ಚೆ, ನಾಟಿದೆ ಕಣ್ಣಿಗೆ ನಯವಾಗಿ !!

Friday 28 August, 2009

ಲೋಕ ಜನನಿ





ಆಲಿಸಿದೆನು ಒಂದು ದಿನ ನಾ
ಅಕ್ಕನ ಮಗನ ಮಾತನ್ನು
ಆ ಪುಟ್ಟ ಕಂದನ ನುಡಿಗಳನು
ನವಮಾಸಗಳ ಮುದ್ದಿನ ಕಣ್ಮಣಿ
ಆಡಿದ ತೊದಲು ಪದಗಳನು
ಅಮ್ಮ ಎಂಬುವ ನುಡಿಮುತ್ತಿಗೆ
ಆ ಸರ್ವಜ್ಞ ತಿಳುಹಿದ ಅರ್ಥವನು
ಲೋಕದ ಜನನಕೆ ಅವಳೇ ಕಾರಣ
ಗಂಡಿನ ಉನ್ನತಿಗೆ ಅವಳೇ ಪ್ರೇರಣ
ಕಣ್ಣಿಗೆ ಕಾಣುವ ದೇವರು ಅವಳು
ಹೋಲಿಕೆ ಮಾಡದ ಪ್ರೀತಿ ಅವಳದು
ಅಂತಹ ದೇವತೆಯ ಪ್ರೀತಿಯ ಪಡೆದ
ನೀನೆ ಎಂದಿಗು ಪುಣ್ಯವಂತ
ಎಂದನಾ ವಿವೇಕವಂತ










Tuesday 7 July, 2009

ಉಬಯ ಕುಶಲೋಪರಿ

ನನಗೆ ಮದುವೆ ನಿಶ್ಚಯವಾದಂತ ದಿನಗಳು. ನನಗೆ ಕವನ ಬರೆಯುವ ಹವ್ಯಾಸವಿದೆ ಎಂದು ಹೇಳಿದಾಗಿನಿಂದ, ಪೂರಿ (ನನ್ನಾಕಿಯ ಪ್ರೀತಿಯ ನಾಮ) ನನಗೆ ಒಂದು ಕವನ ಬರೆದು ಕೊಡಿ ಎಂದು ಜೋತುಬಿದ್ದಾಗ, ನಾ ಬರೆದೆ ಈ ಕವನ.

ನಾ ಬರೆದ ಮೊದಲ ಕುಶಲೋಪರಿ

ನಿನಗೆ ಸಮರ್ಪಿತ ಪೂರಿ ..ಪ..

ತಳುಕು ಬಳುಕಿನ ವಯ್ಯಾರಿ

ನನ ಮುಗ್ದ ಮನಸ್ಸಿನ ವಿಹಾರಿ

ಹಾಡಲು ಕಲಿಯೇ ನೀ ಬಂಗಾರಿ

ನನ ಬಾಳ ಬದುಕಿನ ರೂವಾರಿ ..೧..

ಮದಕರಿ ನಾಡಿನ ಚೆಂದದ ಕುವರಿ

ಕಾಣಲು ತವಕ ನಿನ್ನೂರಿನ ರಹದಾರಿ

ಮುಳುಗಿ ತೇಲಲೇಬೇಕು ಅಲ್ಲಿ ನಾ ಸಾಗರಿ

ನೀಡು ಒಪ್ಪಿಗೆ ಒಂದೆ ಒಂದು ಸಾರಿ

ನಂತರ ನೀನೆ ಹೇಳುವೆ.... ರೀ ಇನ್ನೊಂದು ಬಾರಿ ..೨..

ಇಂತೀ, ನಿನ್ನ ಪ್ರೀತಿಯ ಪುಟ್ಟಾ ರೀ :)