Friday 28 August, 2009

ಲೋಕ ಜನನಿ





ಆಲಿಸಿದೆನು ಒಂದು ದಿನ ನಾ
ಅಕ್ಕನ ಮಗನ ಮಾತನ್ನು
ಆ ಪುಟ್ಟ ಕಂದನ ನುಡಿಗಳನು
ನವಮಾಸಗಳ ಮುದ್ದಿನ ಕಣ್ಮಣಿ
ಆಡಿದ ತೊದಲು ಪದಗಳನು
ಅಮ್ಮ ಎಂಬುವ ನುಡಿಮುತ್ತಿಗೆ
ಆ ಸರ್ವಜ್ಞ ತಿಳುಹಿದ ಅರ್ಥವನು
ಲೋಕದ ಜನನಕೆ ಅವಳೇ ಕಾರಣ
ಗಂಡಿನ ಉನ್ನತಿಗೆ ಅವಳೇ ಪ್ರೇರಣ
ಕಣ್ಣಿಗೆ ಕಾಣುವ ದೇವರು ಅವಳು
ಹೋಲಿಕೆ ಮಾಡದ ಪ್ರೀತಿ ಅವಳದು
ಅಂತಹ ದೇವತೆಯ ಪ್ರೀತಿಯ ಪಡೆದ
ನೀನೆ ಎಂದಿಗು ಪುಣ್ಯವಂತ
ಎಂದನಾ ವಿವೇಕವಂತ










Tuesday 7 July, 2009

ಉಬಯ ಕುಶಲೋಪರಿ

ನನಗೆ ಮದುವೆ ನಿಶ್ಚಯವಾದಂತ ದಿನಗಳು. ನನಗೆ ಕವನ ಬರೆಯುವ ಹವ್ಯಾಸವಿದೆ ಎಂದು ಹೇಳಿದಾಗಿನಿಂದ, ಪೂರಿ (ನನ್ನಾಕಿಯ ಪ್ರೀತಿಯ ನಾಮ) ನನಗೆ ಒಂದು ಕವನ ಬರೆದು ಕೊಡಿ ಎಂದು ಜೋತುಬಿದ್ದಾಗ, ನಾ ಬರೆದೆ ಈ ಕವನ.

ನಾ ಬರೆದ ಮೊದಲ ಕುಶಲೋಪರಿ

ನಿನಗೆ ಸಮರ್ಪಿತ ಪೂರಿ ..ಪ..

ತಳುಕು ಬಳುಕಿನ ವಯ್ಯಾರಿ

ನನ ಮುಗ್ದ ಮನಸ್ಸಿನ ವಿಹಾರಿ

ಹಾಡಲು ಕಲಿಯೇ ನೀ ಬಂಗಾರಿ

ನನ ಬಾಳ ಬದುಕಿನ ರೂವಾರಿ ..೧..

ಮದಕರಿ ನಾಡಿನ ಚೆಂದದ ಕುವರಿ

ಕಾಣಲು ತವಕ ನಿನ್ನೂರಿನ ರಹದಾರಿ

ಮುಳುಗಿ ತೇಲಲೇಬೇಕು ಅಲ್ಲಿ ನಾ ಸಾಗರಿ

ನೀಡು ಒಪ್ಪಿಗೆ ಒಂದೆ ಒಂದು ಸಾರಿ

ನಂತರ ನೀನೆ ಹೇಳುವೆ.... ರೀ ಇನ್ನೊಂದು ಬಾರಿ ..೨..

ಇಂತೀ, ನಿನ್ನ ಪ್ರೀತಿಯ ಪುಟ್ಟಾ ರೀ :)

Tuesday 30 June, 2009

ಆಕಾಂಕ್ಷೆ

ಮತ್ತೆ ನೋಡೊಆಸೆ ಚಿಗುರಿದೆ
ನನ್ನ ಪ್ರೀತಿಯ ಮನುಜಾಳನ್ನು
ಮನವು ಕಾದು ಸೋತು ಸೊರಗಿದೆ
ಸಿಹಿ ದನಿಯ ಕೇಳಬೇಕೆಂದು

ನಯನ ಮನೋಹರ ಮುಗ್ದ ಬಾಲೆಯ
ನಗುವ ಸೆರೆಹಿಡಿಯಬೇಕೆಂದು
ಅವಳ ಕಣ್ಣ ನೋಟದೊಳಗಿನ
ಸಂದೇಶವ ತಿಳಿಯಬೇಕೆಂದು

ಆದರೆ ಕೊಪವೆಕೋ ನನ್ನ ಮೇಲೆ
ಆ ಚಿನಕುರಳಿ ಹೆಣ್ಣಿಗೆ
ನಗು ನಗುತಲೆ ಭಗ್ನ ಮಾಡಿದ
ಮೂಕ ಪ್ರೇಮ ಯಾರ ಸಾಕ್ಷಿಗೆ

ಮರೆಯಲಾಗದೆ ನನ್ನ ಮನಸು
ಮರಳಿ ಯತ್ನವ ಮಾದುತಿಹುದು
ಈ ಬಾರಿಯಾದರೂ ಗೆಲ್ಲುವೆನೆಂಬ
ಆಕಾಂಕ್ಷೆಯಲಿ............................

Wednesday 24 June, 2009

ಗುಲಗಂಜಿ

ಮನೇಲಿ ಮಾತ್ರ ಗುಲಗಂಜಿ ನಾನು
ಆದರೆ ನಿನ "ಎಸ್ಎಂಎಸ್"ಗಳಲಿ ಬಂದಿ ನಾನು
ನನ "ಮೊಬೈಲ್" ಗೂಡಿನ ಅಪರಂಜಿ ನೀನು

Tuesday 23 June, 2009

ನಲ್ಲೆ


ಒಲ್ಲೆ ಅನ್ನಬೇಡವೇ ನಲ್ಲೆ

ಹಾಡುವುದ ಮರೆತೀತು ಗಾನಕೋಗಿಲೆ

ಈಜುವುದ ಮರೆತೀತು ನೀರಮೀನು

ಒಲ್ಲೆ ಅನ್ನದಿರು ನಲ್ಲೆ


ಮಧುರಾತಿ ಮಧುರ ನಿನ್ನ ಅದರ

ವರ್ಣನಾತೀತ ನಿನ್ನ ಅಂಗಾಂಗ

ಮಧುಚಂದ್ರನ ಕಂಡೆವು ಅಂದು ಕದ್ದು ಸೇರಿ

ಮಗದೊಮ್ಮೆ ಪ್ರಸಾದಿಸು ಕರುಣೆ ಬೀರಿ


ನಿನ್ನ ಅಂತರಾಳದ ಬಯಕೆಯ ಬಲ್ಲೆ

ನಿನ್ನ ನೋಟದೊಳಗಿನ ಮರ್ಮವ ಬಲ್ಲೆ

ನಿನ್ನ ತುಂಟಾಟಗಳನು ನಾ ಬಲ್ಲೆ

ಒಲ್ಲೆ ಅನ್ನುವುದಿಲ್ಲ ನನ್ನ ನಲ್ಲೆ

Tuesday 16 June, 2009

ಕಸ್ತೂರಿ ಕನ್ನಡ

ಇದು ೧೯೯೫ರ ವಿಷಯ.. ಮೊದಲ ಬಾರಿ ನಾ ಬರೆದ ಕವನಕ್ಕೆ, ಹೈಸ್ಕೂಲಿನಲ್ಲಿ ಬಹುಮಾನ ಬಂದಿತ್ತು. ಯಾಕೋ ಅದನ್ನು ನನ್ನ ಬ್ಲಾಗನಲ್ಲಿ ಬರೆಯೋಣ ಅನ್ನಿಸಿತು.. ಆದರ ಪ್ರತಿಫಲವೇ ಈ ಗೀಚುಸಾಲು !!

ಅಮ್ಮ..ಅಮ್ಮ.. ಓ ಅಮ್ಮ
ಮಮ್ಮಿ ಅಂತ್ಯಾಕೆ ಕೊಗ್ಬೇಕಮ್ಮ,
ಡ್ಯಾಡಿ ಅಂತ್ಯಾಕೆ ಕರಿಬೇಕಮ್ಮ ,
ಅಪ್ಪ ಅಮ್ಮ ಎನ್ನಲು ನನಗಿಷ್ಟಾನಮ್ಮ

ಅನಂದವಿಲ್ಲ ನನ್ನ ಮನಸಿಗೆ
ಕಳಿಸಬೇಡ ನೀ ನನ್ನ ಕಾನ್ವೆಂಟಿಗೆ
ಕನ್ನಡ ಕಲಿಸು ನೀ ಎನಗೆ
ಅದುವೆ ಆನಂದ ನನ್ನ ಮನಸಿಗೆ

ಅನ್ಯ ಭಾಷೆ ಕಲಿತರೇನು
ನೂರು ಭಾಷೆ ಕಲಿತರೇನು
ಕನ್ನಡವ ನಾ ಮರೆಯೆನು
ಹರಡುವೆ ಎಲ್ಲೆಲ್ಲು ಕಸ್ತೂರಿ ಕನ್ನಡದ ಕಂಪನು

Wednesday 10 June, 2009

ನಗು

ನಗು ನಗುತಾ ಕಂಡ ನಿನ್ನ
ನಗುವಿನ ಮೊಗದಲ್ಲಿ
ನವ ಚೇತನವೊಂದ ಕಂಡೆ
ನನ್ನೆದೆಯ ಅಂತರಾಳದಲ್ಲಿ
ನಗುವೆಂಬ ಸಸಿಯನ್ನ ಚಿಗುರೊಡೆಸಿದೆ
ನರ ನಾಡಿಗಳಲ್ಲಿ ತುಂಬಿದೆ
ನಗುವಿನಾ ಸೊಬಗನ್ನ
ನಲಿಯುತ ಚಿಮ್ಮಿದ ಕಾರಂಜಿಯಲಿ
ನವ ನೂತನ ಅನುರಾಗವನ್ನ ಅನುಭವಿಸಿದೆ
ನಗುವಿನಿಂದಲೇ ನನ್ನ
ನವೀನ ಮಾನವನಾಗಿ ಮಾಡಿದೆ
ನಗುವಿನ ಸಂಕೇತ ನೀನು :>)

Wednesday 13 May, 2009

ಅಮ್ಮ , माँ , అమ్మ, Mother , அம்மா, അമ്മ

ಮೇ ೧೦, ತಾಯಂದಿರ ದಿನ (Mother's Day)

ಭಾನುವಾರ ಎಂದಿನ ಹಾಗೆ ಆರಾಮಾಗಿ ಎದ್ದು ನ್ಯೂಸ್ಪೇಪರ್ ಓದುತ್ತಿದ್ದೆ! ಮುಖ್ಯ ಪುಟಗಳನ್ನು ಮುಗಿಸಿ, ಭಾನುವಾರದ ಸಾಪ್ತಾಹಿಕ ಪುಟ ನೋಡುವಾಗ.. ತಕ್ಷಣ ಕಂಡಿತು "ಅಮ್ಮ"ನ ಬಗೆಗಿನ ಹಲವಾರು ಸುದ್ದಿ, ಕಥೆ, ಕವನಗಳು. ಆಗ ನೆನಪಿಗೆ ಬಂತು ಅಂದು "ತಾಯಂದಿರ ದಿನ" ಎಂಬುದು.


ಪ್ರೀತಿಯ ಆಗರ, ಮಮತಾ ಮೂರ್ತಿ, ತಾಯಿಯ ಜನ್ಮ ದಿನಾಂಕ ನಮ್ಮಲ್ಲಿ ಎಷ್ಟು ಮಂದಿಗೆ ಗೊತ್ತು..!!! ಹಲವಾರು ಕವಿಗಳು ಹೇಳುವ ಹಾಗೆ, ಕಣ್ಣಿಗೆ ಕಾಣುವ ದೇವರು ಎಂದರೆ ನಮಗೆ ಜನ್ಮ ಕೊಟ್ಟ ತಾಯಿ :) ಆ ಕರುಣಾಮಯಿಗೆ ನಾವು ಏನು ಕೊಟ್ಟರು ಋಣ ತೀರದು!!!


ನನ್ನ ಮನಸ್ಯಾಕೋ ಸರಿ ಸುಮಾರು ದಿನಗಳಿಂದ ತಾಯಿಯ ಬಗ್ಗೆ ಒಂದು ಕವನ ಬರಿ ಎಂದು ಹೇಳುತ್ತಿತ್ತು. ಅದಕ್ಕೆ ಕೊಟ್ಟ ಮೂರ್ತರೂಪ ಈ ನನ್ನ ಕವನ. ಇದು ಖಂಡಿತ ನನ್ನ ತಾಯಿಯ ಮಡಿಲಿಗೆ ನಾ ಸಮರ್ಪಿಸುತ್ತಿರುವ ಪುಟ್ಟ ಕಾಣಿಕೆ :)

ತಾಯಿಯ ಆ ರೂಪ

ಮಮತೆಯ ಪ್ರತಿರೂಪ

ಅವಳ ಜನ್ಮವು ಅಪರೂಪ

ಮನಸದು ರಾತ್ರಿಯ ಕೈದೀಪ... ಪ

ರುಧಿರ ಖಂಡಕ್ಕೆ ರೂಪವ ಕೊಡುವ ಅಮರ ಶಿಲ್ಪಿಯವಳು
ಮಾಂಸದ ಮುದ್ದೆಗೆ ಜೀವ ನೀಡುವ ಬ್ರಹ್ಮನ ತದ್ರೂಪಿಯವಳು
ನವಮಾಸಗಳು ಹೊತ್ತು ಹೆತ್ತು ಜನ್ಮವ ಕೊಟ್ಟವಳು
ತನ್ನಯ ಜೀವವನೆ ತೇಯ್ದು ನಮಗೆ ಪ್ರಾಣವ ನೀಡಿದಳು...೧

ತನ್ನ ದೇಹದ ಸಾರವನೆಲ್ಲ ಹಾಲಾಗಿ ಉಣಿಸಿದಳು
ಕರುಣೆ ಪ್ರೀತಿಯೆಂಬ ಊಟವ ಹಾಕಿ ನಮ್ಮನು ಬೆಳೆಸಿದಳು
ತಾನು ಕರಗುತ್ತ ಬೆಳಕ ನೀಡುವ ಅಮೃತ ಮೂರ್ತಿಯವಳು
ಆದ್ದರಿಂದಲೇ "ಅಮ್ಮ" ಎಂದೆಂದು ಬತ್ತದಂತ ಸ್ಪೂರ್ತಿ ಚಿಲುಮೆಯಾದಳು ...೨

ಅಪರೂಪ ಮಾಣಿಕ್ಯ
ಬಾಳಿನ ಸೌಭಾಗ್ಯ
ಅಮ್ಮ ನೆಂದು ಮರೆಯದಿರು
ಕಣ್ಣಿಗೆ ರೆಪ್ಪೆ ಯಂತೆ ಕಾಪಾಡುತಿರು ....೩




Monday 20 April, 2009

"ಅಮೃತ ಸಿಂಚನ"

ನಿನ್ನ ಕಂಡ ಆ ಕ್ಷಣ .
ಮನದಾಳದಿ ಏನೋ ಇಲ್ಲದ ಸಲ್ಲದ ತಲ್ಲಣ ..
ಈ ಬಂಜರು ಹೃದಯದಲಂದು ಅಮೃತ ಸಿಂಚನ...
ಅಂತೂ!! ನನ್ನ ಬ್ರಹ್ಮಚರ್ಯಕ್ಕೆ ಬಿಟ್ಟೆ ತರ್ಪಣ....
ಕಾಯುತಿರುವೆ ಸೇರಲು "ಮಧು" ಮಂಚಾನ......!!!

Thursday 2 April, 2009

ಬೆಳಕು


ಸೂರ್ಯ ರಶ್ಮಿಯಲ್ಲಿನ ಹೊಳಪು

ರಾತ್ರಿ ರಾಜನಲ್ಲಿನ್ನ ನುಣುಪು

ನಮ್ಮ ಮನೆಯ ಬಲುಪು... !!! :-)


Wednesday 25 March, 2009

ಗೀಚುಸಾಲು

ನನ್ನ ಒಲವಿನ ಕಾರಂಜಿ, ನನ್ನ ಬದುಕಿನ ಸ್ಪೂರ್ತಿ ಚಿಲುಮೆ...

ಆಹಾ..! ಸಾಕು ನಿನ್ನ ಕವನ ಮಾರಾಯ ಎಂದು ನೀ ಗೊಗರೆದಷ್ಟು ಉಕ್ಕುತ್ತಿದ್ದ...

ಇನ್ನು ಹೆಚ್ಚು ಸ್ಪೂರ್ತಿ ಪಡೆಯುತ್ತಿದ್ದ ನಿನ್ನ ಬಾಳಿನ ಕತೆಗಾರ, ಕವಿ ಪುಂಗವ...

ನಿನಗಾಗಿ ಮತ್ತೊಮ್ಮೆ ನನ್ನ ಮೂದಲ ಗೀಚುಸಾಲು...!!

ನೀ ಬಂದು ಸೇರಿದೆ ನಮ್ಮ ಕಚೇರಿಗೆ

ಕಳೆಬರದಂತಿದ್ದ ನನಗೆ ನೀನಾದೆ ಆಶಾದೀವಿಗೆ

ಮರೆಯಲಾರದೆ ಹೋದೆ ಕನಸಿನಲು ನಿನ್ನ ನಗೆ

ಪ್ರತಿಕ್ಷಣ ನಾ ಕಳೆದೆ ಹುರುಪಿನಲಿ ನಿನ್ನೊಂದಿಗೆ...!!

ಅಂದು ನೀ ಇದ ಮೆಚ್ಚಿ, ನನ್ನ ಹಿಂದೆ ಸುತ್ತಿ, ನಿನ್ನ ಪ್ರೀತಿಯ ದೇವರುಗಳ, ಹೂಬನಗಳ ನಾವು ಸುತ್ತಿ..ಮರೆಯದ ಕುರುಹುಗಳ ಬಿಟ್ಟು ಬಂದ ಸ್ಥಳಗಳು, ಕೈ ಬೀಸಿ ಕರೆಯುವಂತಿದೆ ನಮ್ಮನು !!!

ಮುಂಜಾನೆಯ ಇಬ್ಬನಿ ಚೆಲ್ಲಿದ ಹಸಿರು ಹಾಸಿಗೆಯ ಮೇಲೆ, ರಾತ್ರಿಯ ಕೈ ದೀಪದ ಅಡಿಯಲ್ಲಿ ನಾವು ಕಳೆದ ಕ್ಷಣಗಳು ಇನ್ನು ಹಸಿರಾಗಿರುವಾಗಲೆ, ಅದ್ಯಾಕೊ ಡಿಯರ್ ನೀ ಕಾಣೆಯಾದೆ, ವಿರಹದ ಬೇಗೆಯ ರುಚಿಯ ನನಗೂ ಉಣಬಡಿಸಿದೆ !!!

ಆಹಾ! ಅದೆಂಥ ಶುಭದಿನ, ನಿನ್ನ ದರ್ಶನ ಪಡೆದ ಕ್ಷಣ,ಖುಶಿಯಲಿ ಹರಿದಾಡಿತು ನಯನ...ಮುಡಿಯಿಂದ ಅಡಿಯವರೆಗೆ..ಸ್ಥಬ್ಡವಾಯಿತು ಹ್ರುದಯ, ನೋಡಿ ನಿನ್ನ ಕಾಲೊಂದಿಗೆ......!!!!!!

ನಾರಿ - ಸಾರಿ

ಕಂಡಳು ಪಾರ್ಕಿನಲ್ಲಿ ಒಬ್ಬಂಟಿ ನಾರಿ..
ದೊಚಿದಳು ನನ್ನನು ಒಂದು ನಗೆಯ ಬೀರಿ...
ಆಹಾ! ಏನಾ ತುಟಿ ಕೆಂಪು ಚೆರ್ರಿ....
ಕೇಳಿದೆನು ಮುತ್ತನು ಒಂದೇ ಒಂದು ಬಾರಿ.....
ನಾರಿ, ನಗು ನಗುತ್ತಲೇ ಹೇಳಿದಳು............. ಸಾರಿ ..........!!! :-(