Tuesday 30 June, 2009

ಆಕಾಂಕ್ಷೆ

ಮತ್ತೆ ನೋಡೊಆಸೆ ಚಿಗುರಿದೆ
ನನ್ನ ಪ್ರೀತಿಯ ಮನುಜಾಳನ್ನು
ಮನವು ಕಾದು ಸೋತು ಸೊರಗಿದೆ
ಸಿಹಿ ದನಿಯ ಕೇಳಬೇಕೆಂದು

ನಯನ ಮನೋಹರ ಮುಗ್ದ ಬಾಲೆಯ
ನಗುವ ಸೆರೆಹಿಡಿಯಬೇಕೆಂದು
ಅವಳ ಕಣ್ಣ ನೋಟದೊಳಗಿನ
ಸಂದೇಶವ ತಿಳಿಯಬೇಕೆಂದು

ಆದರೆ ಕೊಪವೆಕೋ ನನ್ನ ಮೇಲೆ
ಆ ಚಿನಕುರಳಿ ಹೆಣ್ಣಿಗೆ
ನಗು ನಗುತಲೆ ಭಗ್ನ ಮಾಡಿದ
ಮೂಕ ಪ್ರೇಮ ಯಾರ ಸಾಕ್ಷಿಗೆ

ಮರೆಯಲಾಗದೆ ನನ್ನ ಮನಸು
ಮರಳಿ ಯತ್ನವ ಮಾದುತಿಹುದು
ಈ ಬಾರಿಯಾದರೂ ಗೆಲ್ಲುವೆನೆಂಬ
ಆಕಾಂಕ್ಷೆಯಲಿ............................

Wednesday 24 June, 2009

ಗುಲಗಂಜಿ

ಮನೇಲಿ ಮಾತ್ರ ಗುಲಗಂಜಿ ನಾನು
ಆದರೆ ನಿನ "ಎಸ್ಎಂಎಸ್"ಗಳಲಿ ಬಂದಿ ನಾನು
ನನ "ಮೊಬೈಲ್" ಗೂಡಿನ ಅಪರಂಜಿ ನೀನು

Tuesday 23 June, 2009

ನಲ್ಲೆ


ಒಲ್ಲೆ ಅನ್ನಬೇಡವೇ ನಲ್ಲೆ

ಹಾಡುವುದ ಮರೆತೀತು ಗಾನಕೋಗಿಲೆ

ಈಜುವುದ ಮರೆತೀತು ನೀರಮೀನು

ಒಲ್ಲೆ ಅನ್ನದಿರು ನಲ್ಲೆ


ಮಧುರಾತಿ ಮಧುರ ನಿನ್ನ ಅದರ

ವರ್ಣನಾತೀತ ನಿನ್ನ ಅಂಗಾಂಗ

ಮಧುಚಂದ್ರನ ಕಂಡೆವು ಅಂದು ಕದ್ದು ಸೇರಿ

ಮಗದೊಮ್ಮೆ ಪ್ರಸಾದಿಸು ಕರುಣೆ ಬೀರಿ


ನಿನ್ನ ಅಂತರಾಳದ ಬಯಕೆಯ ಬಲ್ಲೆ

ನಿನ್ನ ನೋಟದೊಳಗಿನ ಮರ್ಮವ ಬಲ್ಲೆ

ನಿನ್ನ ತುಂಟಾಟಗಳನು ನಾ ಬಲ್ಲೆ

ಒಲ್ಲೆ ಅನ್ನುವುದಿಲ್ಲ ನನ್ನ ನಲ್ಲೆ

Tuesday 16 June, 2009

ಕಸ್ತೂರಿ ಕನ್ನಡ

ಇದು ೧೯೯೫ರ ವಿಷಯ.. ಮೊದಲ ಬಾರಿ ನಾ ಬರೆದ ಕವನಕ್ಕೆ, ಹೈಸ್ಕೂಲಿನಲ್ಲಿ ಬಹುಮಾನ ಬಂದಿತ್ತು. ಯಾಕೋ ಅದನ್ನು ನನ್ನ ಬ್ಲಾಗನಲ್ಲಿ ಬರೆಯೋಣ ಅನ್ನಿಸಿತು.. ಆದರ ಪ್ರತಿಫಲವೇ ಈ ಗೀಚುಸಾಲು !!

ಅಮ್ಮ..ಅಮ್ಮ.. ಓ ಅಮ್ಮ
ಮಮ್ಮಿ ಅಂತ್ಯಾಕೆ ಕೊಗ್ಬೇಕಮ್ಮ,
ಡ್ಯಾಡಿ ಅಂತ್ಯಾಕೆ ಕರಿಬೇಕಮ್ಮ ,
ಅಪ್ಪ ಅಮ್ಮ ಎನ್ನಲು ನನಗಿಷ್ಟಾನಮ್ಮ

ಅನಂದವಿಲ್ಲ ನನ್ನ ಮನಸಿಗೆ
ಕಳಿಸಬೇಡ ನೀ ನನ್ನ ಕಾನ್ವೆಂಟಿಗೆ
ಕನ್ನಡ ಕಲಿಸು ನೀ ಎನಗೆ
ಅದುವೆ ಆನಂದ ನನ್ನ ಮನಸಿಗೆ

ಅನ್ಯ ಭಾಷೆ ಕಲಿತರೇನು
ನೂರು ಭಾಷೆ ಕಲಿತರೇನು
ಕನ್ನಡವ ನಾ ಮರೆಯೆನು
ಹರಡುವೆ ಎಲ್ಲೆಲ್ಲು ಕಸ್ತೂರಿ ಕನ್ನಡದ ಕಂಪನು

Wednesday 10 June, 2009

ನಗು

ನಗು ನಗುತಾ ಕಂಡ ನಿನ್ನ
ನಗುವಿನ ಮೊಗದಲ್ಲಿ
ನವ ಚೇತನವೊಂದ ಕಂಡೆ
ನನ್ನೆದೆಯ ಅಂತರಾಳದಲ್ಲಿ
ನಗುವೆಂಬ ಸಸಿಯನ್ನ ಚಿಗುರೊಡೆಸಿದೆ
ನರ ನಾಡಿಗಳಲ್ಲಿ ತುಂಬಿದೆ
ನಗುವಿನಾ ಸೊಬಗನ್ನ
ನಲಿಯುತ ಚಿಮ್ಮಿದ ಕಾರಂಜಿಯಲಿ
ನವ ನೂತನ ಅನುರಾಗವನ್ನ ಅನುಭವಿಸಿದೆ
ನಗುವಿನಿಂದಲೇ ನನ್ನ
ನವೀನ ಮಾನವನಾಗಿ ಮಾಡಿದೆ
ನಗುವಿನ ಸಂಕೇತ ನೀನು :>)