Sunday, 11 December 2011

 ರಮಣೀಕಾಂತ

ಮರಳಿ ಬಾ ರಮಣೀ
ಭಗೆದಿಡಬೇಕು ಮನದಾಳದ ಇಂಗಿತವನ್ನು
ಇದಿರು ನೋಡಿ ಮಸುಕಾಗಿದೆ ದಾರಿ
ಏರುಪೇರಾಗಿದೆ ಮಿಡಿತ, ಮರಗಟ್ಟಿದೆ ಬದುಕು ..ಮ..

ಸವಿಸುಂದರ ಬಾಳದಾರಿಯಿಂದ ಅಚಾನಕ್ಕಾಗಿ ಹೊರನಡೆದೆ
ಸಕಲವ ತಿಳಿದು ಮರಳುಗಾಡ ಚೆಲುವಿಗೆ ಮರುಳಾದೆ
ಅಮೃತವ ಹಂಚಲು ಹೋಗಿ, ಹಾಲಹಲದ ಪಾಲದೆ ..ಮ..
             
ಮರಳಿ ಬಾ ರಮಣೀ
ಕಾಳಸಂತೆಯಲಿ ಬಿಕರಿಯಾಗುವ ಮುನ್ನ
ಸಿರಿದೇವಿ ನಿನ್ನ ಕಾಂತಿ ಕಮರುವ ಮುನ್ನ
ಕಣ್ತೆರೆದು ನೋಡು ತೀರ ಕರಗುವ ಮುನ್ನ

ಕಾಂತನಿಲ್ಲಿ ಕಾದಿಹನು ರಮಣೀ





Thursday, 24 February 2011

ಕರಿನೆರಳು

ಮನದಲ್ಲಿ ಕರಿನೆರಳು ತುಂಬಿದೆ
ಎಲ್ಲೆಲ್ಲೂ ಮೌನವೇ ಮನೆ ಮಾಡಿದೆ
ಭಾವನೆಗಳು ಬರಿದಾಗಿವೆ
ನೆನಪುಗಳು ಎಡೆಬಿಡದೆ ಸುಳಿದಾಡಿದೆ .. !
ಕನಸಿನಲು ಒಂದೇ ಪ್ರಶ್ನೆ ಕಾಡಿದೆ
ನೀನೇಕೆ ಬದಲಾದೆ
ನೀನೇಕೆ .... ಬರಿದಾದೆ ..!
ಹೇಳು, ನನ್ನದೇನು ತಪ್ಪಿದೆ .. !!