Tuesday, 23 June 2009

ನಲ್ಲೆ


ಒಲ್ಲೆ ಅನ್ನಬೇಡವೇ ನಲ್ಲೆ

ಹಾಡುವುದ ಮರೆತೀತು ಗಾನಕೋಗಿಲೆ

ಈಜುವುದ ಮರೆತೀತು ನೀರಮೀನು

ಒಲ್ಲೆ ಅನ್ನದಿರು ನಲ್ಲೆ


ಮಧುರಾತಿ ಮಧುರ ನಿನ್ನ ಅದರ

ವರ್ಣನಾತೀತ ನಿನ್ನ ಅಂಗಾಂಗ

ಮಧುಚಂದ್ರನ ಕಂಡೆವು ಅಂದು ಕದ್ದು ಸೇರಿ

ಮಗದೊಮ್ಮೆ ಪ್ರಸಾದಿಸು ಕರುಣೆ ಬೀರಿ


ನಿನ್ನ ಅಂತರಾಳದ ಬಯಕೆಯ ಬಲ್ಲೆ

ನಿನ್ನ ನೋಟದೊಳಗಿನ ಮರ್ಮವ ಬಲ್ಲೆ

ನಿನ್ನ ತುಂಟಾಟಗಳನು ನಾ ಬಲ್ಲೆ

ಒಲ್ಲೆ ಅನ್ನುವುದಿಲ್ಲ ನನ್ನ ನಲ್ಲೆ

1 comment: