Tuesday 16 June, 2009

ಕಸ್ತೂರಿ ಕನ್ನಡ

ಇದು ೧೯೯೫ರ ವಿಷಯ.. ಮೊದಲ ಬಾರಿ ನಾ ಬರೆದ ಕವನಕ್ಕೆ, ಹೈಸ್ಕೂಲಿನಲ್ಲಿ ಬಹುಮಾನ ಬಂದಿತ್ತು. ಯಾಕೋ ಅದನ್ನು ನನ್ನ ಬ್ಲಾಗನಲ್ಲಿ ಬರೆಯೋಣ ಅನ್ನಿಸಿತು.. ಆದರ ಪ್ರತಿಫಲವೇ ಈ ಗೀಚುಸಾಲು !!

ಅಮ್ಮ..ಅಮ್ಮ.. ಓ ಅಮ್ಮ
ಮಮ್ಮಿ ಅಂತ್ಯಾಕೆ ಕೊಗ್ಬೇಕಮ್ಮ,
ಡ್ಯಾಡಿ ಅಂತ್ಯಾಕೆ ಕರಿಬೇಕಮ್ಮ ,
ಅಪ್ಪ ಅಮ್ಮ ಎನ್ನಲು ನನಗಿಷ್ಟಾನಮ್ಮ

ಅನಂದವಿಲ್ಲ ನನ್ನ ಮನಸಿಗೆ
ಕಳಿಸಬೇಡ ನೀ ನನ್ನ ಕಾನ್ವೆಂಟಿಗೆ
ಕನ್ನಡ ಕಲಿಸು ನೀ ಎನಗೆ
ಅದುವೆ ಆನಂದ ನನ್ನ ಮನಸಿಗೆ

ಅನ್ಯ ಭಾಷೆ ಕಲಿತರೇನು
ನೂರು ಭಾಷೆ ಕಲಿತರೇನು
ಕನ್ನಡವ ನಾ ಮರೆಯೆನು
ಹರಡುವೆ ಎಲ್ಲೆಲ್ಲು ಕಸ್ತೂರಿ ಕನ್ನಡದ ಕಂಪನು

1 comment:

  1. ನಟರಾಜ್,
    ತುಂಬಾ ಚನ್ನಾಗಿದೆ.
    ನಾನು ಚಿಕ್ಕವನಿದ್ದಾಗ ನನ್ನನ್ನು ಕಾನ್ವೆಂಟಿಗೆ ಸೇರಿಸೆಲ್ಲ ಎನ್ನುವ ಭಾದೆ ನನ್ನನ್ನು ಕಾಡುತ್ತಿತ್ತು.
    ಆದರೆ ಇಂದು ನನಗೆ, ಅವರು ಕನ್ನಡ ಶಾಲೆಗೆ ಸೇರಿಸಿದ್ದಕ್ಕಾಗಿ ನಾನು ಹೆಮ್ಮೆ ಪಡುತ್ತಿದ್ದೇನೆ.
    ಚಿಕ್ಕಂದಿನಲ್ಲೇ ನಿಮ್ಮ ಮನಸು ಕನ್ನಡದ ಮೇಲೆ ಒಲವು ತೋರಿಸಿದ್ದು ನೋಡಿ ನನಗೆ ತುಂಬಾ ಸಂತೋಷವಾಗಿದೆ.
    ಒಳ್ಳೆಯ ಕವನ.
    ಧನ್ಯವಾದಗಳು

    ReplyDelete