Wednesday, 10 June 2009

ನಗು

ನಗು ನಗುತಾ ಕಂಡ ನಿನ್ನ
ನಗುವಿನ ಮೊಗದಲ್ಲಿ
ನವ ಚೇತನವೊಂದ ಕಂಡೆ
ನನ್ನೆದೆಯ ಅಂತರಾಳದಲ್ಲಿ
ನಗುವೆಂಬ ಸಸಿಯನ್ನ ಚಿಗುರೊಡೆಸಿದೆ
ನರ ನಾಡಿಗಳಲ್ಲಿ ತುಂಬಿದೆ
ನಗುವಿನಾ ಸೊಬಗನ್ನ
ನಲಿಯುತ ಚಿಮ್ಮಿದ ಕಾರಂಜಿಯಲಿ
ನವ ನೂತನ ಅನುರಾಗವನ್ನ ಅನುಭವಿಸಿದೆ
ನಗುವಿನಿಂದಲೇ ನನ್ನ
ನವೀನ ಮಾನವನಾಗಿ ಮಾಡಿದೆ
ನಗುವಿನ ಸಂಕೇತ ನೀನು :>)

1 comment:

  1. ಸೂಪರ್ ಆಗಿ ಇದೆ ನಟರಾಜ್..
    ತುಂಬಾ ಇಷ್ಟ ಆಯ್ತು....

    ReplyDelete